Some recent photos near R'R' Apartments !
Link : https://youtu.be/oy9PYF5lM5k
ಓಂ ನಮೋ ನಾರಾಯಣಾಯ ನಮಃ
ಹಿಂದೂ ಧರ್ಮದಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ತ್ರಿಮೂರ್ತಿ ದೇವರುಗಳು. ವಿಷ್ಣುವಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳು, ಸ್ತೋತ್ರಗಳು, ಮಂತ್ರಗಳು, ವಿಷ್ಣುವಿಗಾಗಿ ಪ್ರತ್ಯೇಕ ಹಬ್ಬಗಳು ಕೂಡ ಇದೆ. ವಿಷ್ಣು ಅವತರಿಸಿದ 10 ವಿವಿಧ ಅವತಾರಗಳಿಂದ ಆತನನ್ನು ನೀತಿಕಥೆಗಳಲ್ಲಿ ನಾರಾಯಣ ಎಂದು ಕರೆಯಲಾಗುತ್ತದೆ. ಯಾವುದೇ ಓರ್ವ ವ್ಯಕ್ತಿಯು ವಿಷ್ಣು ಮಂತ್ರವನ್ನು ಜಪಿಸುವುದರಿಂದ ಆತನಿಗೆ ಸುಖ, ಶಾಂತಿ, ಸಮೃದ್ಧಿ, ಆರೋಗ್ಯ ಪ್ರಾಪ್ತವಾಗುತ್ತದೆ. ಯಾರು ಬೇಕಾದರು ಜಪಿಸಬಹುದಾದ ಸರಳ ವಿಷ್ಣು ಮಂತ್ರಗಳಿವು :
1) ಮುಕ್ತಿ ಮಂತ್ರ:
ಓಂ ಭಗವತೇ ವಾಸುದೇವಾಯ ನಮಃ
ಉಪಯೋಗ: ಸರ್ವರ ಮನಸ್ಸಿನಲ್ಲಿ ನೆಲೆಯಾಗಿರುವ ಭಗವಾನ್ ವಿಷ್ಣುವನ್ನು ನಮಸ್ಕರಿಸುತ್ತೇನೆ. ಈ ಮಂತ್ರವನ್ನು ಜಪಿಸುವುದರಿಂದ ನಮ್ಮಲ್ಲಿನ ಸಹಾನುಭೂತಿಯು ವೃದ್ಧಿಯಾಗುತ್ತದೆ. ಪ್ರತಿಯೊಂದು ಜೀವಿಗಳಲ್ಲಿಯೂ ದೈವಿಕ ಅಸ್ಥಿತ್ವವನ್ನು ನೆನಪಿಸಿಕೊಳ್ಳಲು ಇದು ಸಹಕಾರಿ. ಈ ಮಂತ್ರದಿಂದ ಒಬ್ಬರ ಜೀವನದ ಅಡೆ-ತಡೆಗಳು ದೂರವಾಗುತ್ತದೆ.
2) ವಿಷ್ಣು ಶಾಂತಾಕಾರಂ ಮಂತ್ರ:
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಧಾರಂ ಗಗನಸದ್ರಿಶಂ, ಮೇಘವರ್ಣಂ ಶುಭಾಂಗಂ
ಲಕ್ಷ್ಮಿಂಕಾತಂ ಕಮಲಾನಯನಂ, ಯೋಗಿಭಿರ್ಧ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ, ಸರ್ವಲೋಕೈಕನಾಥಂ
ಶಿವನ ಅಭಿಷೇಕಕ್ಕೆ ಯಾವ ದಿನ ಸೂಕ್ತ..? ಯಾವ ಅಭಿಷೇಕದಿಂದ ಏನು ಪ್ರಯೋಜನ ?
ಉಪಯೋಗ: ಈ ಮಂತ್ರವನ್ನು ನಿಯಮಿತವಾಗಿ ಜಪಿಸುವುದರಿಂದ ಆ ವ್ಯಕ್ತಿಯಲ್ಲಿನ ಭಯವು ನಾಶವಾಗುತ್ತದೆ. ಆ ವ್ಯಕ್ತಿಯು ನಿರ್ಭಯನಾಗುತ್ತಾನೆ. ಈ ಮಂತ್ರದ ಪಠಣೆಯು ಅವಾಸ್ತವ ಲೌಕಿಕ ಸಂಬಂಧದಿಂದ ಅಥವಾ ವ್ಯವಹಾರಗಳಿಂದ ಮತ್ತು ಅದರ ಭಯದಿಂದ ಹೊರಬರಲು ಸಹಕರಿಸುತ್ತದೆ.
3) ಶ್ರೀ ವಿಷ್ಣು ಮಂತ್ರ:
ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುಶ್ ಚ ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವದೇವ
-By Sources.
Three nice videos are there, you can watch :
1. https://photos.app.goo.gl/YGHWW8esFjWVTeaM9
2. https://photos.app.goo.gl/tWZwgSBrC9DnfSMC8
3. https://photos.app.goo.gl/J9f1SEezHdndJuoW7





Comments
Post a Comment